ಕಾಂಗರೂ ಇಲಿಉತ್ತರ ಅಮೇರಿಕ ಪ್ರದೇಶದಲ್ಲಿ ಕಂಡು ಬರುವ ಕಾಂಗರೂವಿನಂತೆ ವರ್ತಿಸುವ ಒಂದು ಜಾತಿಯ ಇಲಿ. == ವೈಜ್ಞಾನಿಕ ವರ್ಗೀಕರಣ == ಇದು ಹೆಟರೋಮೈಯಿಡೀ ಕುಟುಂಬಕ್ಕೆ ಸೇರಿದ ಡೈಪೋಡೋಮಿಸ್ ಜಾತಿಗೆ ಸೇರಿದೆ. ಇದರಲ್ಲಿ ಸುಮಾರು ೨೦ ಪ್ರಭೇದಗಳನ್ನು ಗುರುತಿಸಲಾಗಿದೆ. == ಶಾರೀರಿಕ ಲಕ್ಷಣಗಳು == ಉದ್ದವಾದ ಹಿಂಗಾಲು,ಸಣ್ನ ಮುಂಗಾಲು ಮತ್ತು ತುಲನಾತ್ಮಕವಾಗಿ ದೊಡ್ಡ ತಲೆಯನ್ನು ಹೊಂದಿರುತ್ತವೆ. ದೊಡ್ಡ ಕಣ್ಣುಗಳು, ದೇಹಕ್ಕಿಂತ ಉದ್ದವಾದ ಕುಚ್ಚುಳ್ಳ ಬಾಲ ಇದರ ಇತರ ವೈಶಿಷ್ಟ್ಯಗಳು. ಕೆನ್ನೆಯ ಎರಡೂ ಕಡೆ ಆಹಾರವನ್ನು ಕೂಡಿಡಲು ಅನುಕೂಲವಾಗುವಂತೆ ಚೀಲಗಳಿ ರುತ್ತವೆ.ಗಂಡು ಹೆಣ್ಣಿಗಿಂತ ದೊಡ್ಡದಿರುತ್ತದೆ. == ಚಲನೆ == ಕಾಂಗರೂ ಇಲಿಗಳು ಎರಡು ಕಾಲಿನಲ್ಲಿ ಚಲಿಸುತ್ತವೆ. ಸಾಮನ್ಯವಾಗಿ ೬ ಆಡಿಗಳ ಅಂತರಕ್ಕೆ ಕೆಲವೊಮ್ಮ ೯ ಆಡಿಯವರೇಗೂ ಜಿಗಿಯಬಲ್ಲವು 9 (2.75 ).ಇದರ ವೇಗ ಸೆಕೆಂಡಿಗೆ ೧೦ ಆಡಿಗಳಿರುತ್ತದೆ . ಜಿಗಿತದ ನಡುವೆ ಚುರುಕಾಗಿ ದಿಕ್ಕನ್ನು ಬದಲಿಸಬಲ್ಲುದು.ಇದರ ಈ ಗುಣ ಮತ್ತು ಕೆಲವೊಮ್ಮೆ ನಿಸ್ತೇಜ ಸ್ಥಿತಿಯಲ್ಲಿ ಉಳಿಯುವ ಗುಣ ಇದನ್ನು ತನ್ನ ವೈರಿಗಳಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ . == ವಾಸ == ಕಾಂಗರೂ ಇಲಿಗಳು ಬಿಲ ತೋಡಲು ಅನುಕೂಲವಾಗುವ ಜೌಗು ಅಥವಾ ಅರೆಜೌಗು ಪ್ರದೇಶಗಳಲ್ಲಿ ವಾಸಿಸುತ್ತವೆ .ಕೆಲವು ಪ್ರಭೇದಗಳು ಹುಲ್ಲುಗಾವಲು ಮತ್ತು ಪೊದೆಕಾಡುಗಳಲ್ಲಿ ಬದುಕುತ್ತವೆ.ಇವುಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಬಿಲಗಳಲ್ಲಿ ವಾಸಿಸು ತ್ತವೆ.ಬಿಲದ ಒಳಗೆ ಹಲವಾರು ಕೋಣೆಗಳನ್ನು ಮಾಡಿಕೊಳ್ಳುತ್ತವೆ.ಕೆಲವೊಮ್ಮೆ ನೂರಾರು ಬಿಲಗಳ ವಸಾಹತುಗಳೂ ಕಂಡು ಬರುತ್ತದೆ... == ಆಹಾರ == ಸಾಮಾನ್ಯವಾಗಿ ಕಾಳುಗಳು . ಕೆಲವೊಮ್ಮೆ ಚಿಗುರು ಸಸ್ಯಗಳನ್ನು, ಕೀಟಗಳನ್ನು ಕೂಡಾ ಭಕ್ಷಿಸುತ್ತವೆ .ಕೆನ್ನೆಯ ಪಕ್ಕ ಇರುವ ಚೀಲಗಳಲ್ಲಿ ಕಾಳುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. == ಬಾಹ್ಯ ಸಂಪರ್ಕಗಳು == -- . 1091, 1922 . 2010-08-06 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==